ನವದೆಹಲಿಯಲ್ಲಿ ಕಲಾ ಉತ್ಸವ

Posted by on Jan 31, 2013 in ದೃಶ್ಯ ಸಂಸ್ಕೃತಿ|Visual Culture | 0 comments

ಭಾರತೀಯ ದೃಶ್ಯಕಲೆಗೆ ಅಂತರ್ರಾಷ್ಟ್ರೀಯ ವೇದಿಕೆಯನ್ನು ಕಲ್ಪಿಸುವ ‘೫ನೇ ಇಂಡಿಯಾ ಆರ್ಟ್ ಫೇರ್’, ಮೂರು ದಿನಗಳ ಆಧುನಿಕ ಮತ್ತು ಸಮಕಾಲೀನ ಕಲೆಯ, ಕಲಾ ಉತ್ಸವ ಇಂದಿಲ್ಲಿ ಆರಂಭವಾಯಿತು. ಫೆಬ್ರವರಿ ೧ ರಿಂದ ೩ ರವರೆಗೆ ನಡೆಯಲಿರುವ ಈ ಉತ್ಸವದಲ್ಲಿ ೨೩ ದೇಶಗಳ, ೧೦೩ ಪ್ರದರ್ಶನಕಾರರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲಿದ್ದಾರೆ. ಇದರಲ್ಲಿ ಸಮೂಹ ಮತ್ತು ಏಕವ್ಯಕ್ತಿ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗಿದೆ.

MF Hussain paintings

Raghav KK art work

ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಭಾರತೀಯ ಕಲೆಗೆ ಅಂತರ್ರಾಷ್ಟ್ರೀಯ ವೇದಿಕೆ ಕಲ್ಪಿಸುವುದರ ಜೊತೆಜೊತೆಗೆ, ಭಾರತೀಯ ಕಲಾಸಕ್ತರು, ಕಲಾವಿದರಿಗೆ ಅಂತರ್ರಾಷ್ಟ್ರೀಯ ಕಲಾ ಪ್ರದರ್ಶನಾಕರರು, ಸಂಗ್ರಹಕಾರರನ್ನು ಮುಖಾಮುಖಿಯಾಗಿಸುವುದರ ಮೂಲಕ, ಭಾರತೀಯ ದೃಶ್ಯಕಲೆಯ ಮಾರುಕಟ್ಟೆಯನ್ನು ವಿಸ್ತರಿಸುವ ವೇದಿಕೆಯಾಗಿ ೨೦೦೮ರಲ್ಲಿ ಪ್ರಾರಂಭವಾದ ಈ ಉತ್ಸವ ಯಶಸ್ವಿಯಾಗಿ ೫ನೆ ವರ್ಷಕ್ಕೆ ಕಾಲಿರಿಸಿದೆ. ಈ ಉತ್ಸವದಲ್ಲಿ ಅಂತರ್ರಾಷ್ಟ್ರೀಯ ಗ್ಯಾಲರಿಗಳೊಂದಿಗೆ ದೆಹಲಿ, ಬೆಂಗಳೂರು, ಮುಂಬೈ, ಕಲ್ಕತ್ತಾ, ಕೊಚ್ಚಿ, ಹೈದರಾಬಾದ್,ಚೆನ್ನೈ, ಕೊಲ್ಕತ್ತಾ, ಜೈಪುರ್ ಮತ್ತು ಆಗ್ರಾದ ಕಲಾಗ್ಯಾಲರಿಗಳೂ ತಮ್ಮ ಪ್ರದೇಶದ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸುತ್ತಿದೆ.

Metal sculpture

ART FAIR entrance

DSC09914

Damien hirst art work

Atul Dodiya work

DSC09917

DSC09920

DSC09921

ಈ ಉತ್ಸವದಲ್ಲಿ ಚಿತ್ರಕಲೆ, ಇನ್ಸ್‌ಟಾಲ್ಲೇಷನ್, ಶಿಲ್ಪಕಲೆ, ವಿಡಿಯೋ ಕಲೆಯ ಪ್ರದರ್ಶನದ ಜೊತೆಗೆ ಸಮಕಾಲೀನ ಕಲೆ ಮತ್ತು ಆಧುನಿಕ ಕಲೆಯನ್ನು ಕುರಿತಾಗಿ ೩ ದಿನಗಳ ವಿಚಾರಸಂಕಿರಣವನ್ನು ಏರ್ಪಡಿಸಿದ್ದು, ದೇಶದ ಖ್ಯಾತ ಕಲಾ ಇತಿಹಾಸಕಾರರಾದ ಗೀತಾ ಕಪೂರ್, ತಪತಿ ಗುಹಾನ್ ಥಾಕೂರ್ ರವರು ಸೇರಿದಂತೆ ಅಂತರ್ರಾಷ್ಟ್ರೀಯ ಕಲಾ ಇತಿಹಾಸಕಾರರು ಸಮಕಾಲೀನ ಕಲೆಯ ಕುರಿತಾದ ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ. ಈ ವಿಚಾರಸಂಕಿರಣದಲ್ಲಿ ಸಾರ್ವಜನಿಕರು ಮುಕ್ತವಾಗಿ ಭಾವಗಹಿಸಬಹುದಾಗಿದೆ.
// ಮಂಸೋರೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.