ಬ್ಲಾಗ್|Blog

’ಚರ್ಚ್’ ಎಸ್.ಎಚ್.ರಝಾರವರ ಕಲಾಕೃತಿಯೊಳಗೊಂದು ನೋಟ

Posted by on Aug 25, 2012 in ವಿಮರ್ಶೆಗಳು|Reviews | 0 comments

(೨೫-೦೮-೨೦೧೨ರ ಪ್ರಜಾವಾಣಿ ಸಾಪ್ತಾಹಿಕದಲ್ಲಿ ಪ್ರಕಟಿತ ಲೇಖನ) ೧೯೫೮ರಲ್ಲಿ ಎಸ್.ಎಚ್.ರಾಝ ರಿಂದ ರಚಿಸಲ್ಪಟ್ಟ ಕಲಾಕೃತಿ ’ಚರ್ಚ್’. ಇದು ಅದಾಗಲೇ ಪಾಶ್ಚಿಮಾತ್ಯ ಕಲಾ ಪ್ರಪಂಚದಲ್ಲಿ ಅಂತ್ಯವನ್ನು ಕಂಡಿದ್ದ ಹಲವು ಇಸಂಗಳಲ್ಲಿ ಪ್ರಮುಖವಾದ ಎಕ್ಸ್‌ಪ್ರೆಶನಿಸಂ ಶೈಲಿಯಲ್ಲಿ ರಚಿತವಾಗಿದೆ. ವೀಕ್ಷಣೆಗೆ ದಕ್ಕುವ ವಸ್ತು, ಸನ್ನಿವೇಶ, ಪರಿಸರಕ್ಕೆ ಕಲಾವಿದ ತನ್ನ ಕೃತಿಯೊಳಗೆ ತಾನು ಕಂಡಂತೆ ತನ್ನದೇ ಶೈಲಿಯಲ್ಲಿ ಅಭಿವ್ಯಕ್ತಿಸುವ ಪಂಥವಾದ ಎಕ್ಸ್‌ಪ್ರೆಶನಿಸಂ ಶೈಲಿಯಲ್ಲಿ ಇರುವ ಈ ಕಲಾಕೃತಿಯಲ್ಲಿ ಎಸ್.ಎಚ್.ರಾಝರವರು ತಾವು ನೋಡಿದ ಫಾರ್ನ್ಸ್‌ನಲ್ಲಿನ ಇರುಳಿನ ದೃಶ್ಯವನ್ನು ಅಮೂರ್ತ ರೂಪದಲ್ಲಿ ಇಲ್ಲಿ ಚಿತ್ರಿಸಿದ್ದಾರೆ. ಇದರ ಶೀರ್ಷಿಕೆ ಹೇಳುವಂತೆ ಇದರಲ್ಲಿನ ವಿಷಯ ಚರ್ಚ್‌ನದ್ದಾಗಿದ್ದರೂ, ಈ ಕಲಾಕೃತಿಯಲ್ಲಿ ಚರ್ಚ್ ಕಲಾಕೃತಿಯಲ್ಲಿ ಕೇಂದ್ರಬಿಂದುವಾಗಿ...

Read More

ಕರ್ನಾಟಕದಲ್ಲಿ ಸಮಕಾಲೀನ ದೃಶ್ಯಸಂಸ್ಕೃತಿಯ ಗ್ರಹಿಕೆಗೊಂದು ತಾತ್ವಿಕ ಹಿನ್ನೆಲೆ : ಎಚ್.ಎ. ಅನಿಲ್ ಕುಮಾರ್ .ಭಾಗ-೪

Posted by on Jun 11, 2012 in ದೃಶ್ಯ ಸಂಸ್ಕೃತಿ|Visual Culture | 0 comments

ಕರ್ನಾಟಕದಲ್ಲಿ ನೆಲೆಸಿ, ಹೊಸವಸ್ತು ಹಾಗೂ ಹೊಸಮಾಧ್ಯಮದಲ್ಲಿ ಸೃಜನಶೀಲತೆಯನ್ನು ಸಾಕಾರಗೊಳಿಸಿದ ಬಹುಪಾಲು ಕಲಾವಿದರು ಮಧ್ಯಮವರ್ಗದಿಂದ ಬಂದವರು. ಆರ್ಥಿಕ ಸಹಾಯ ದೊರಕಿಸಿಕೊಡುವ ಗ್ಯಾಲರಿ ನೆಟ್‌ವರ್ಕ್, ಪ್ರಾಯೋಜಕತೆ (ಸ್ಪಾನ್ಸರ್‌ಷಿಪ್), ಆರ್ಡರ್‌ವರ್ಕ್ ಮುಂತಾದವುಗಳು ಇರದಿದ್ದಾಗ, ಇದ್ದರೂ ಅವು ಹಿರಿಯ ಕಲಾವಿದರ ಹಿಡತದಲ್ಲಿದ್ದಾಗ, ಕಿರಿಯರು ಮಾಡಿದ ಮೊದಲ ಕೆಲಸವೆಂದರೆ ಇವೆಲ್ಲಕ್ಕೂ ಕಾರಣವಾದ ’ಶೈಲೀಕರಣ’ವನ್ನೇ ಹೊರಗಿಟ್ಟಿದ್ದು. ಶೈಲಿಯ ನಿರಾಕರಣವೆಂದರೆ ಈಸಲ್ ಚಿತ್ರಕಾರರ, ತನ್ಮೂಲಕ ಕ್ರೈಸ್ಥಧರ್ಮ ಪ್ರೇರಿತ, ಯುರೋ-ಸೆಂಟ್ರಿಕ್, ಬಿಳಿಯ ಗಂಡಿನ, ಕಣ್ಣಿನ ಪಾಪೆ ’ನಿರ್ಮಿತಿಯ’ (ಇಂಗ್ಲೀಷ್ ತತ್ವಶಾಸ್ತ್ರದಲ್ಲಿ ಇದನ್ನು ‘ಕನ್‌ಸ್ಟ್ರಕ್ಟ್’ ಅನ್ನುತ್ತಾರೆ) ನಿರಾಕರಣವೆಂತಲೂ ಆಯಿತು. ಮತ್ತೆಲ್ಲಿಯೋ ಇರುವಂತಲ್ಲದೆ, ಇಲ್ಲಿ ಚಿತ್ರ, ಸ್ಕೆಚಸ್,...

Read More

ಕರ್ನಾಟಕದಲ್ಲಿ ಸಮಕಾಲೀನ ದೃಶ್ಯಸಂಸ್ಕೃತಿಯ ಗ್ರಹಿಕೆಗೊಂದು ತಾತ್ವಿಕ ಹಿನ್ನೆಲೆ : ಎಚ್.ಎ. ಅನಿಲ್ ಕುಮಾರ್ .ಭಾಗ-೩

Posted by on Jun 11, 2012 in ದೃಶ್ಯ ಸಂಸ್ಕೃತಿ|Visual Culture | 0 comments

ಇಪ್ಪತ್ತನೇ ಶತಮಾನದ ಅಂತ್ಯದ ಕಾಲುಶತಮಾನದಲ್ಲಿ ಕಲಾತ್ಮಕ ವಸ್ತುವು ಸ್ಥಿತ್ಯಂತರಗೊಂಡ ಇತಿಹಾಸವು ಏನಿಲ್ಲವೆಂದರೂ ರೂಪನಿಷ್ಠತೆಗೆ ಸಡ್ಡುಹೊಡೆದಂತಹದ್ದು. ಉದಾಹರಣೆಗೆ, ಸಾಹಿತ್ಯ ಪ್ರಣೀತವಾದ ನವೋದಯದ ಕಾಲದಲ್ಲಿ ಇಲ್ಲಿನ ದೃಶ್ಯಕಲೆಯಲ್ಲಿ ಕಲಾವಸ್ತುವು ನಿಸರ್ಗಕ್ಕೆ ನಿಷ್ಟವಾಗಿತ್ತು. ಅಂದರೆ ಆಗ ಕಲಾವಸ್ತುವೆಂಬುದು ಒಂದು ಘನವಸ್ತುವಾಗಿರದೆ, ಭೂಗೋಳವನ್ನು ಒಡೆದು ಎಲ್ಲೆಡೆ ಹರಡಿದಂತಿತ್ತು. ಆದ್ದರಿಂದಲೇ ಆಗೆಲ್ಲ ಕಲಾಕೃತಿ ಅಥವ ಕಲಾವಸ್ತುವೆಂದರೆ ನಿಸರ್ಗಚಿತ್ರಗಳೇ ಮನಸ್ಸಿಗೆ ಬರುವುದು (ಉದಾಹರಣೆಗೆ ರುಮಾಲೆ ಚೆನ್ನಬಸಪ್ಪ, ಎನ್. ಹನುಮಯ್ಯ, ಉತ್ತರ ಕರ್ನಾಟಕದ ಕಲಾವಿದರು ಮುಂತಾದವರು). ’ಹರಡಿದ ವಸ್ತುಗಳೆಂದು’ ಇದನ್ನು ಕರೆಯಬಹುದಾದರೂ ಇದರ ಅರ್ಥವು ಏಕಶಿಲೆಯ ಅಹಮಿಕೆಯನ್ನು ಮೀರಿದ ಸ್ಥಿತಿ ಎಂದೂ ಆಗಬಹುದು. ನಿಸರ್ಗಚಿತ್ರಣವು ಘನವಸ್ತುಗಳ...

Read More

ಕರ್ನಾಟಕದಲ್ಲಿ ಸಮಕಾಲೀನ ದೃಶ್ಯಸಂಸ್ಕೃತಿಯ ಗ್ರಹಿಕೆಗೊಂದು ತಾತ್ವಿಕ ಹಿನ್ನೆಲೆ : ಎಚ್.ಎ. ಅನಿಲ್ ಕುಮಾರ್ .ಭಾಗ-೨

Posted by on Jun 11, 2012 in ದೃಶ್ಯ ಸಂಸ್ಕೃತಿ|Visual Culture | 0 comments

(೨) ’ವಸ್ತುವಿನ ಸುತ್ತಲಿನ ಅರ್ಥವೆಂಬುದು’ ವಸಾಹತೀಕೃತ ರ್ಮಿತಿ: ವಿಶೇಷವೆಂದರೆ ನಮ್ಮ ಸುತ್ತಮುತ್ತಲೂ ಈಗ ಕಂಡುಬರುವ ವಸ್ತುಗಳಲ್ಲಿ ಬಹುಪಾಲು ವಸ್ತುಗಳು (ಅಥವ ಅವುಗಳ ಹೆಸರುಗಳು) ಅವುಗಳ ಸಾಮಾಜಿಕ ’ಉಪಯುಕ್ತತೆ’ಯನ್ನು ಆಧರಿಸಿ ಹುಟ್ಟಿಕೊಂಡದ್ದಕ್ಕೆ ಕಾರಣ, ಅವುಗಳೆಲ್ಲ ಬಂಡವಾಳಶಾಹಿತ್ವವು (ಕ್ಯಾಪಿಟಲಿಸಂ) ಹುಟ್ಟಿದ ಮೇಲೆ, ಕಲಾವಿದನ ವೈಯಕ್ತಿಕ ಸಹಿ ಪ್ರಮುಖವಾದ ನಂತರ ರೂಪಿತವಾದುವು-ಮಣ್ಣಿನಿಂದ ಶಿಲ್ಪದ ಅವಸ್ಥೆಗೆ ತೇರ್ಗಡೆಗೊಂಡಂತೆ ಇದು. ನಾಗರೀಕತೆಯು ವಸ್ತುಗಳನ್ನು ಹೆಸರಿಸುವ, ಅದರ ಒಡೆತನ ನಿರ್ಧರಿಸುವ ಎರಡನೇ ಕ್ರಮವು ನಾಮಕರಣಕ್ಕೆ ಉದ್ಯುಕ್ತವಾದ ಸಾಂಸ್ಥೀಕರಣದ ಅಸಹಾಯಕತೆಯಿಂದ ಹುಟ್ಟಿಕೊಂಡಂತಹದ್ದುಃ ವಸ್ತುವೊಂದಕ್ಕೆ ನಿರ್ದಿಷ್ಟ ಹೆಸರು ನೀಡಲಾಗದಿದ್ದಲ್ಲಿ ಅದನ್ನು ’ಇಂತಹದ್ದೇ ಬಳಕೆಗೆ ನಿರ್ದಿಷ್ಟವಾಗಿರುವ ವಸ್ತು’ ಎಂದು ಒಂದು...

Read More

I AM HERE

Posted by on Oct 3, 2011 in ದೃಶ್ಯ ಸಂಸ್ಕೃತಿ|Visual Culture | 0 comments

Read More

Contesting National and the State: K K Hebbar’s Modernist Project : HA Anil Kumar

Posted by on Sep 21, 2011 in ಲೇಖನಗಳು|‌Articles | 0 comments

An attempt to grasp and understand Modern Art in India is to agree to travel in a vehicle which is extremely hegemonic in nature, with too many ‘left over’ from within that hierarchy. It is high time for that vehicle to stop and get an overhaul done before it traverses more sophisticated premises. In other words, the deletions and inclusions of Indian Modern Art (IMA) indicate a ‘selection’ of artists- and hence art works and art situations- framed and hung as ‘the’ Indian Modernists. The selection itself speaks about a certain epistemological politics of...

Read More