ವಿಮರ್ಶೆಗಳು|Reviews

ಅಭಿವ್ಯಕ್ತಿಯ ರೂಪದ ಚೌಕಟ್ಟಿನೊಳಗೊಂದು ಸೃಜನ-ಸ್ಪಂದ

Posted by on Sep 24, 2012 in ವಿಮರ್ಶೆಗಳು|Reviews | 0 comments

ಅಭಿವ್ಯಕ್ತಿಯ ರೂಪದ ಚೌಕಟ್ಟಿನೊಳಗೊಂದು ಸೃಜನ-ಸ್ಪಂದ ಪ್ರಸ್ತುತ ಕರ್ನಾಟಕದ ಕಲಾಶಿಕ್ಷಣದಲ್ಲಿ ಅಕಾಡೆಮಿಕ್ ಪ್ರಭಾವದ ನಡುವೆಯೂ ಅಭಿವ್ಯಕ್ತಿಯು ತನ್ನ ಚೌಕಟ್ಟುಗಳನ್ನು ಮೀರಲು ಪ್ರಯತ್ನಿಸುತ್ತಿರುವುದು ಉತ್ತಮ ಬೆಳವಣಿಗೆಯಾದರು ಇದರ ಸಂಖ್ಯೆ ಕಡಿಮೆಯೇ. ಶಿಕ್ಷಣದ ಹೊರಗೆ ಪ್ರಸ್ತುತ ಸಮಕಾಲೀನ ಕಲೆಯಲ್ಲಿ ಹಲವಾರು ಪ್ರಯೋಗಗಳು ನಡೆಯುತ್ತಿದ್ದರು ಅಕಾಡೆಮಿಕ್ ಪದ್ದತಿಯು ತನ್ನ ಅಭಿವ್ಯಕ್ತಿಯ ವ್ಯಾಪ್ತಿಯನ್ನು ಕ್ಯಾನ್ವಾಸಿನ ಚೌಕಟ್ಟಿನೊಳಗೆ ಬಂಧಿಸಿಕೊಂಡಿರುವುದು ವಿಪರ್ಯಾಸವೇ ಸರಿ. ಇದಕ್ಕೊಂದು ಉದಾಹರಣೆಯಾಗಿ ಇತ್ತೀಚಿಗೆ ರಸ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನಗೊಂಡ ‘ಸೃಜನ-ಸ್ಪಂದ’ ಸಮೂಹ ಪ್ರದರ್ಶನವನ್ನು ಉದಾಹರಿಸಬಹುದು. ಇದು ಬೆಂಗಳೂರು ವಿಶ್ವವಿದ್ಯಾಲಯದಿಂದ ಇದೀಗ ತಾನೆ ಸ್ನಾತಕೋತ್ತರ ಪದವಿ ಮುಗಿಸಿರುವ ೮ ಜನ ಯುವ ಕಲಾವಿದರ...

Read More

’ಚರ್ಚ್’ ಎಸ್.ಎಚ್.ರಝಾರವರ ಕಲಾಕೃತಿಯೊಳಗೊಂದು ನೋಟ

Posted by on Aug 25, 2012 in ವಿಮರ್ಶೆಗಳು|Reviews | 0 comments

(೨೫-೦೮-೨೦೧೨ರ ಪ್ರಜಾವಾಣಿ ಸಾಪ್ತಾಹಿಕದಲ್ಲಿ ಪ್ರಕಟಿತ ಲೇಖನ) ೧೯೫೮ರಲ್ಲಿ ಎಸ್.ಎಚ್.ರಾಝ ರಿಂದ ರಚಿಸಲ್ಪಟ್ಟ ಕಲಾಕೃತಿ ’ಚರ್ಚ್’. ಇದು ಅದಾಗಲೇ ಪಾಶ್ಚಿಮಾತ್ಯ ಕಲಾ ಪ್ರಪಂಚದಲ್ಲಿ ಅಂತ್ಯವನ್ನು ಕಂಡಿದ್ದ ಹಲವು ಇಸಂಗಳಲ್ಲಿ ಪ್ರಮುಖವಾದ ಎಕ್ಸ್‌ಪ್ರೆಶನಿಸಂ ಶೈಲಿಯಲ್ಲಿ ರಚಿತವಾಗಿದೆ. ವೀಕ್ಷಣೆಗೆ ದಕ್ಕುವ ವಸ್ತು, ಸನ್ನಿವೇಶ, ಪರಿಸರಕ್ಕೆ ಕಲಾವಿದ ತನ್ನ ಕೃತಿಯೊಳಗೆ ತಾನು ಕಂಡಂತೆ ತನ್ನದೇ ಶೈಲಿಯಲ್ಲಿ ಅಭಿವ್ಯಕ್ತಿಸುವ ಪಂಥವಾದ ಎಕ್ಸ್‌ಪ್ರೆಶನಿಸಂ ಶೈಲಿಯಲ್ಲಿ ಇರುವ ಈ ಕಲಾಕೃತಿಯಲ್ಲಿ ಎಸ್.ಎಚ್.ರಾಝರವರು ತಾವು ನೋಡಿದ ಫಾರ್ನ್ಸ್‌ನಲ್ಲಿನ ಇರುಳಿನ ದೃಶ್ಯವನ್ನು ಅಮೂರ್ತ ರೂಪದಲ್ಲಿ ಇಲ್ಲಿ ಚಿತ್ರಿಸಿದ್ದಾರೆ. ಇದರ ಶೀರ್ಷಿಕೆ ಹೇಳುವಂತೆ ಇದರಲ್ಲಿನ ವಿಷಯ ಚರ್ಚ್‌ನದ್ದಾಗಿದ್ದರೂ, ಈ ಕಲಾಕೃತಿಯಲ್ಲಿ ಚರ್ಚ್ ಕಲಾಕೃತಿಯಲ್ಲಿ ಕೇಂದ್ರಬಿಂದುವಾಗಿ...

Read More