ಅಮೂರ್ತತೆಯಲ್ಲಿ ಮೂಡಿದ ಭಯದ ಮೂರ್ತ ರೂಪಗಳು
ಅಮೂರ್ತತೆಯಲ್ಲಿ ಮೂಡಿದ ಭಯದ ಮೂರ್ತ ರೂಪಗಳು ಆ ಕಟ್ಟಡದಲ್ಲಿ ಒಂದೊಂದೇ ಅಂತಸ್ತನ್ನು ಏರುತ್ತಿದ್ದ ಆ ಯುವ ಛಾಯಾಗ್ರಾಹಕನಿಗೆ ಅದರ ಹಿಂದಿನ ದಿನ ನಡೆದ ಘಟನೆಯಲ್ಲಿ ಸುಟ್ಟು ಕರಕಲಾದ ಮಹಡಿಯ ಒಳಗಿನ ಒಂದೊಂದು ರೂಪವು, ಅಲ್ಲಿ ಘಟನೆ ನಡೆಯುವಾಗ ಅಲ್ಲಿ ಸಿಲುಕಿದ್ದ ಜನಗಳ ಮನಸೊಳಗೆ ತುಂಬಿದ್ದ ಭೀತಿಯನ್ನು ಪ್ರತಿಬಿಂಬಿಸುತ್ತಿದ್ದವು. ಇಡೀ ಕಟ್ಟಡದಲ್ಲಿ ಹೆಚ್ಚು ಹಾನಿಗೆ ಒಳಗಾಗಿದ್ದ ಆರು ಮತ್ತು ಏಳನೇ ಅಂತಸ್ತಿನಲ್ಲಿ ಎಲ್ಲಿ ನೋಡಿದರು ಆ ಛಾಯಾಗ್ರಾಹಕನಿಗೆ ಕಾಣುತ್ತಿದ್ದದ್ದು ಬೆಂಕಿಯಿಂದ ಸುಟ್ಟು ಕರಕಲಾದ ವಸ್ತುಗಳು, ಗೋಡೆಗಳು, ಕಿಟಕಿ ಬಾಗಿಲುಗಳು, ಅದರ ಮೇಲೆ ಮೂಡಿರುವ ಘಟನೆಯ ಭೀಕರತೆಯನ್ನು ಮೂರ್ತಗೊಳಿಸುವ ಅಮೂರ್ತ ರೂಪಗಳು, ಆ ಗುರುತಗಳು ಯಾವುವು ಉದ್ದೇಶಪೂರ್ವಕವಾಗಿ ಮೂಡಿಸಿದ ಗುರುತುಗಳಲ್ಲ, ಬೆಂಕಿ ಹೊತ್ತಿಕೊಂಡಾಗ ಅಲ್ಲಿದ್ದ ಜನರು ಅಲ್ಲಿಂದ...
Read More